   ಮೂಲದ ಜತೆ ಪರಿಶೀಲಿಸಿ

ಓಲಿಯಿಕ್ ಆಮ್ಲ: ಅಣುಸೂತ್ರ ಅ17ಊ33ಅಔ.ಔಊ. ಕೊಬ್ಬು ಮತ್ತು ತೈಲಗಳಲ್ಲಿ ಗ್ಲಿಸರೈಡಾಗಿ ದೊರೆಯುತ್ತದೆ. ಆಲಿವ್ ಎಣ್ಣೆಯಲ್ಲಿ 76%-86% ಓಲಿಯಿಕ್ ಆಮ್ಲವಿದೆ. ತಿಳಿಹಳದಿ ಬಣ್ಣದ ರುಚಿ ವಾಸನೆಗಳಿಲ್ಲದ ದ್ರವ, 2860 ಸೆಂ.ನಲ್ಲಿ ಕುದಿಯುತ್ತದೆ. ನೀರಿಲ್ಲಿ ಅದ್ರಾವ್ಯ. ಆಲ್ಕೊಹಾಲ್ ಮತ್ತು ಈಥರುಗಳಲ್ಲಿ ಲೀನವಾಗುತ್ತದೆ. ವೇಗವರ್ಧಕದ ಸಂಪರ್ಕದಲ್ಲಿ ಹೈಡ್ರೊಜನ್ನನ್ನು ಹಾಯಿಸಿದಾಗ ಪರ್ಯಾಪ್ತಗೊಂಡು ಸ್ಟಿಯರಿಕ್ ಆಮ್ಲವಾಗುವುದು. ಗಾಳಿಯಲ್ಲಿರುವ ಆಕ್ಸಿಜನ್ನಿನಿಂದ ಉತ್ಕರ್ಷಿತವಾಗಿ ಕಮಟು ಹಿಡಿಯುತ್ತದೆ. ಸಿಸ್-ಟ್ರಾನ್ಸ್‌ ಅಥವಾ ಜ್ಯಾಮಿತೀಯ ರೂಪಾಂತರ (ಜೊಮೆಟ್ರಿಕ್ ಐಸೊಮೆರಿಸಂ) ಪ್ರದರ್ಶಿಸುವುದು ಇದರ ವೈಶಿಷ್ಟ್ಯ. ಓಲಿಯಿಕ್ ಆಮ್ಲದಲ್ಲಿ ಸಿಸ್ ರಚನೆಯಿದೆ. ಅಂದರೆ ದ್ವಿಬಂಧಿಕ ಇಂಗಾಲದ ಪರಮಾಣುಗಳ ಒಂದೇ ಪಾಶರ್ವ್‌ದಲ್ಲಿ ಹೈಡ್ರೊಜನ್ನಿನ ಪರಮಾಣುಗಳು ಇರುತ್ತವೆ. ಇದರ ಪ್ರತಿರೂಪದ ಇಲೇಡಿಕ್ ಆಮ್ಲದಲ್ಲಿ ದ್ವಿಬಂಧದ ಇಕ್ಕೆಲಗಳಲ್ಲಿ ಹೈಡ್ರೋಜನ್ನಿನ ಪರಮಾಣುಗಳು ಇರುವುದನ್ನು ಗಮನಿಸಬಹುದು. ಈ ರೂಪಾಂತರಕ್ಕೆ ನೈಟ್ರಸ್ಆಮ್ಲ ವೇಗವರ್ಧಕವಾಗಿ ವರ್ತಿಸುತ್ತದೆ. 1800-2000 ಸೆಂ.ಉಷ್ಣತಾ ಮಿತಿಯಲ್ಲಿ ಸೆಲೆನಿಯಂ ಸಂಪರ್ಕದಲ್ಲಿ 66% ಪರಿವರ್ತನೆಯನ್ನು ಸಾಧಿಸಬಹುದು.
      ಅಊ3.(ಅಊ2)7¾ಅ¾ಊ       ಅಊ3.(ಅಊ2)7¾ಅ¾ಊ
                 ||                        ||    
ಊಔಔಅ¾(ಅಊ2)7¾ಅ¾ಊ                    ಊ¾ಅ¾(ಅಊ2)7.ಅಔಔಊ
       ಓಲಿಯಿಕ್ ಆಮ್ಲ               ಇಲೇಡಿಕ್ ಆಮ್ಲ
ಓಲಿಯಿಕ್ ಆಮ್ಲ ನೆಟ್ರಿಕ್ ಆಮ್ಲದಿಂದ ಉತ್ಕರ್ಷಣಗೊಂಡು ಪೆಲಾರ್ಗೋನಿಕ್ ಆಮ್ಲ [ಅಊ3.(ಅಊ2)7.ಅಔಔಊ] ಮತ್ತು ಅಜಿûಲೇಯಿಕ್ ಆಮ್ಲಗಳನ್ನು  [ಊಔಔಅ¾(ಅಊ2)7¾ಅಔಔಊ] ಕೊಡುವುದು. ಆದ್ದರಿಂದ ಓಲಿಯಿಕ್ ಆಮ್ಲದಲ್ಲಿ 9:10 ಸ್ಥಾನದ ನಡುವೆ ದ್ವಿಬಂಧಕವಿರಬೇಕೆಂದು ಗೊತ್ತಾಗುತ್ತದೆ. ಓಲಿಯಿಕ್ ಆಮ್ಲದ ಪ್ರಧಾನ ಉಪಯೋಗ ಉಣ್ಣೆಯಿಂದ ನೂಲು ತೆಗೆಯುವುದರಲ್ಲಿ. ಇದರ ಸೋಡಿಯಂ ಮತ್ತು ಪೊಟ್ಯಾಸಿಯಂ ಲವಣಗಳೇ ಸಾಬೂನು. ಇತರ ಲೋಹಗಳ ಓಲಿಯೇಟುಗಳನ್ನು ಒತ್ತರ ವಿಧಾನದಿಂದ ತಯಾರಿಸುವರು. ಸೋಡಿಯಂ ಮತ್ತು ಪೊಟ್ಯಾಸಿಂ ಓಲಿಯೇಟುಗಳು ದ್ರಾವ್ಯ ವಸ್ತುಗಳು. ಇವುಗಳಿಗೆ ಖನಿಜಾಮ್ಲಗಳು ಇತರ ಲೋಹ ಲವಣಗಳ ದ್ರಾವಣಗಳನ್ನು ಸೇರಿಸಿದರೆ ಆಯಾ ಲೋಹದ ಓಲಿಯೇಟುಗಳು ಒತ್ತರಿಸುವುವು. ಇದಕ್ಕೆ ಅಗತ್ಯವಾದ 90% ಶುದ್ಧವಾದ ಓಲಿಯಿಕ್ ಆಮ್ಲ ಈಗ ಮಾರುಕಟ್ಟೆಯಲ್ಲಿ ದೊರೆಯುತ್ತಿದೆ. ಕ್ಯಾಡ್ಮಿಯಂ ಓಲಿಯೇಟು ಹಳದಿ, ತಾಮ್ರ ಮತ್ತು ನಿಕ್ಕಲ್ ಓಲಿಯೇಟುಗಳು ನೀಲಿ, ಕಬ್ಬಿಣದ ಓಲಿಯೇಟು ಹಸುರು ಮತ್ತು ಮ್ಯಾಂಗನೀಸ್ ಓಲಿಯೇಟು ತಿಳಿನೇರಳೆ ಬಣ್ಣದ ಲವಣಗಳು. ಪರಿಶುದ್ಧ ಸೋಡಿಯಂ ಓಲಿಯೇಟು ಬಿಳಿಯ ಪುಡಿ. ಇದು ಕೊಲೆಲಿಥಿಯಾಸಿಸ್ ರೋಗಕ್ಕೆ ಪರಿಣಾಮಕಾರಿಯಾದ ಮದ್ದು, ಪೊಟ್ಯಾಸಿಯಂ ಓಲಿಯೇಟಿನ ದ್ರಾವಣದಿಂದ ಕೀವು ತುಂಬಿದ ವ್ರಣಗಳನ್ನು ತೊಳೆಯುತ್ತಿದ್ದರೆ ಬೇಗ ವಾಸಿಯಾಗುವುವು. ಓಲಿಯಿಕ್ ಆಮ್ಲದ ಮೀಥೈಲ್ ಈಥೈಲ್ ಬ್ಯೂಟೈಲ್ ಮತ್ತು ಗ್ಲೈಕಾಲ್ ಎಸ್ಟರುಗಳು ಈಗ ಮಾರುಕಟ್ಟೆಯ ಮಸ್ತುಗಳು. ಗ್ಲೈಕಾಲ್ ಓಲಿಯೇಟುಗಳು ಬಟ್ಟೆ. ಚರ್ಮ ಮತ್ತು ಪೆಟ್ರೋಲಿಯಂ ಉದ್ಯಮಗಳಲ್ಲಿಯೂ ಕೀಟನಾಶಕಗಳೂ ಮತ್ತು ಅಂಗರಾಗಗಳ ತಯಾರಿಕೆಯಲ್ಲಿಯೂ ವ್ಯಾಪಕವಾಗಿ ಉಪಯೋಗವಾಗುತ್ತಿವೆ.		        (ಎಚ್.ಜಿ.ಎಸ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ